ಶುಕ್ರವಾರ, ನವೆಂಬರ್ 21, 2014

ಬುತ್ತಿ

ನೆನಪಿನ ಬುತ್ತಿಯಲ್ಲಿ ಬೆಚ್ಚಗೆ ಕುಳಿತ
ಹತ್ತು ಹಲವು ನೆನಪುಗಳು
 ಮತ್ತೆ ಮತ್ತೆ ಬರುತಿದೆ
ಮನದ ಅಂಗಳಕ್ಕೆ ಸಾಲು  ಸಾಲಾಗಿ
ನೂರು ಪುಟಗಳು ತಿರುವಿದರೂ
ತಿರುಗಿ ಬರುತಿದೆ ನಿನ್ನ  ಹೆಜ್ಜೆ ಗುರುತು
 ಘಲ್ ಘಲ್ ಎನುತಿದೆ ಹೃದಯದಲ್ಲಿ
ನಾ ತೊಡಿಸಿದ ಒಲವಿನ
ಕಾಲ್ಗೆಜ್ಜೆಯ ಸವಿ ಸದ್ದು ....



ಶನಿವಾರ, ಆಗಸ್ಟ್ 9, 2014

ಪೂಜೆ ...

ಕಾಲ್ತೊಳೆದು ಒಳ ಕರೆವೆ 
ಬಲಗಾಲಿಟ್ಟು ಬಾ 
ನನ್ನ ಹೃದಯ ಮಂದಿರಕ್ಕೆ 
ಪೂಜಿಸುವೆ ನಿನ್ನ 
ಹೃದಯ ಸಿಂಹಾಸನದಲಿ ಪ್ರತಿಸ್ಥಾಪಿಸಿ 
ಅನವರತ 
ಮುಚ್ಚು ಮರೆ ಇಲ್ಲದೆ
ಹುಚ್ಚು ಪ್ರೀತಿಯ ಧಾರೆ ಎರೆವೆ
ನಿನ್ನ ನೋವನೆಲ್ಲ ಮರೆಸಿ ..... !!! 

ಸೋಮವಾರ, ಜುಲೈ 28, 2014

ಹೇಗೆ ಹಚ್ಚಲಿ ??

ಕಾಡಿಗೆ ಹಚ್ಚುವ ಬಯಕೆ ನನ್ನದು 
ನನ್ನ ಕಣ್ಣಲ್ಲಿ ಅಚ್ಚಾಗಿ ನಿಂತ ನಿನ್ನ 
ಕಿರುಗಣ್ಣಿನ ಆ ತುಂಟ ಕುಡಿನೋಟಕ್ಕೆ... 

ಇನಿಯ ಮತ್ತೊಬ್ಬನಿರುವಾಗ 
ಆ ನೋಟಕ್ಕೆ ಹೇಗೆ ಹಚ್ಚಲಿ ??
ನಾ ನಿನಗೆ ... !!!


ಶುಕ್ರವಾರ, ಜುಲೈ 25, 2014

ಉಡುಗೊರೆ

ಕೇಳಲಿಲ್ಲ ನಿನ್ನ ಬಳಿ 
ಒಲವನ್ನು ಬಿಟ್ಟು ಬೇರೇನೂ 
ಕೊಡಲಿಲ್ಲ ನೀ ನನಗೆ
ಒಂಟಿತನವನ್ನು ಬಿಟ್ಟು ಮತ್ತೇನು ...........

ಗುರುವಾರ, ಜುಲೈ 17, 2014

ಅತ್ತಿತ್ತ ನೋಡದಿರು . ಅತ್ತು ಹೊರಳಾಡದಿರು

ಸುಮ್ಮನೆ ಕುಳಿತಿದ್ದೆ , ಬೇಸರ ಕಳೆಯಲು youtube ಲಿ ಹಳೆ , ಹೊಸ , ಹಿಂದಿ , ಕನ್ನಡ ಚಲನಚಿತ್ರ ಗೀತೆಗಳನ್ನು ನೋಡುತ್ತಿದ್ದೆ , ಯಾವುದನ್ನು ನೋಡಿದರೂ ಮನಸ್ಸಿಗೆ ಸಮಾದಾನ ಇರಲ್ಲಿಲ್ಲ , ಹೀಗೆ ಹುಡುಕುತ್ತಾ  ಒಂದು ಹಾಡು  ಸಿಕ್ಕಿತು ಅದನ್ನು ಕೇಳಿದಾಗ ಮನಸ್ಸು ತುಂಬಾನೇ ಹಗುರಾಗಿತು .... ಪ್ರತಿಯೊಬ್ಬ ತಾಯಿಯೂ  ನನ್ನ ಮಗುವಿಗೆ ಮಮತೆಯನ್ನು ಧಾರೆಯೆರೆದು ಮಲಗಿಸುವಾಗ ಹೇಳುವ ಹಾಡು .... "ಅತ್ತಿತ್ತ ನೋಡದಿರು . ಅತ್ತು ಹೊರಳಾಡದಿರು ನಿದ್ದೆ ಬರುವಳು ಹೊದ್ದು ಮಲಗು ಮಗುವೇ .. ಜೋ.... "  . ಬಹುಷ ಕರ್ನಾಟಕದಲ್ಲಿ ಹುಟ್ಟಿದ ಪ್ರತಿಯೊಂದು ಮಗುವು ಈ ಹಾಡನ್ನು ಕೇಳದೆ ನಿದ್ರಿಸಿಲ್ಲವೇನೋ . ! ಆಹಾ  ಎಂತ ಅದ್ಬುತ ರಚನೆ !!! ತಾಯಿ ತನ್ನ ಮುದ್ದಿನ ಕಂದನನ್ನು ಚಂದಿರನ ಊರಿಗೇ ಕರೆದೊಯ್ಯುತಾಳೆ ..ನಕ್ಷತ್ರವನ್ನೆ ಮಗುವಿಗೆ ಅಂಗಿ ಮಾಡಿ ಹಾಕುವ ಕಲ್ಪನೆ ನಿಜಕ್ಕೂ ಅದ್ಭುತ , ಪಟ್ಟದಾನೆಯ ಮೇಲೆ ಪುಟ್ಟ ಮಗುವನ್ನು ಕೂರಿಸುವ ಕಲ್ಪನೆಯಂತು ಬಣ್ಣಿಸಲಸದಳ  ! ಇದನ್ನು ರಚಿಸಿದ ಮಹಾನುಭಾವರಿಗೆ ಹಾಟ್ಸ್ ಆಫ್  ಹೇಳಲೇ ಬೇಕು .... ಕೇಳಿದ ಕೂಡಲೇ ನೆನಪಾಗಿದ್ದು ಬಾಲ್ಯದಲ್ಲಿ ನನ್ನ ತಂಗಿ ತಮ್ಮಂದಿರನ್ನು ಮಲಗಿಸುವಾಗ . ಅಜ್ಜಿ , ಅಮ್ಮ ಚಿಕ್ಕಮಂದಿರು ಈ ಹಾಡನ್ನೇ ಹೆಚ್ಚಾಗಿ ಹೇಳುತ್ತಿದ್ದರುಆರೇಳು ತಿಂಗಳಿನಿಂದ ಊರಿಗೆ ಹೋಗದೇ ಕುಟುಂಬದವರನ್ನು ನೋಡದ ನನಗೆ ಯಾಕೋ ಊರಿನ , ಮನೆಯವರ ನೆನಪು ಬಹಳವಾಗಿ ಕಾಡಲು ಶುರುವಾಯಿತು ... 

ಭಾನುವಾರ, ಜುಲೈ 13, 2014

ಕನಸು

ಸುರಿಯುತ್ತಿರುವ ಜಡಿ ಮಳೆಯಂತೆ
ನಿನ್ನ ನೆನಪುಗಳ ಮಳೆ
ನನ್ನ ಎದೆಯಲ್ಲಿ
ನನ್ನೀ ಬೆಂದ ಹೃದಯಕ್ಕೆ
ಒಲವೆಂಬ ತಂಗಾಳಿಯಾಗಿದ್ದೆ ನೀ ,,,
ಮರೆತೆ ನಾ ,,, ನನ್ನನ್ನೇ
ನಿನ್ನ ಒಲವಿನ ನುಡಿಗೆ
ಅರಿವಿಲ್ಲದಂತೆ ಬಂದಿಯಾಗಿದ್ದೆ
ನಿನ್ನ ಒಲುಮೆಯ ಪಾಶಕ್ಕೆ
 ಕನಸು .... ??
ಅದು ಕನಸಾಗಿಯೇ ಉಳಿದಿತ್ತು
ನಿನ್ನ ತೋಳಲ್ಲಿ ಬಂದಿಯಾಗುವ ಹಂಬಲ
ಕಣ್ಣು ತನಗರಿವಿಲ್ಲದೆಯೇ  ತನ್ನ ಹನಿಗಳನ್ನು ಹೊರಹಾಕಿತ್ತು ..
ಮತ್ತೊಬ್ಬರ ತೋಳಲ್ಲಿ ನೀನೇ ಬಂದಿಯಾಗಲು ಹೊರಟಾಗ .. !!!

ಬುಧವಾರ, ಜುಲೈ 9, 2014

ನಿನಗಾಗಿ ಈ ಕೊನೆಯ ಕವನ .........

ಹೇಳಬೇಕಾಗಿದ್ದ ಮಾತು
ಮನದಲ್ಲೇ ಉಳಿದಿತ್ತು ...
ಈಗ ತಾನೇ ಹುಟ್ಟಿದ್ದ ಪ್ರೀತಿ
 ಮೊಳಕೆಯಲ್ಲೇ ಸತ್ತು ಹೋಗಿತ್ತು ....
ಮಾತು ಮೌನಕ್ಕೆ ತಿರುಗಿತ್ತು
ಗೆಳೆತನ ಕೊನೆಯಾಗಿತ್ತು ಅರಿವೇ ಇಲ್ಲದಂತೆ
 ಮನದ ಅವ್ಯಕ್ತ ದುಗುಡ
 ಹೇಳಲಾಗ ತಳಮಳ ... !!!
ಕೈಗೆ ಸಿಗುವ ಮೊದಲೇ ಹಾರಿ ಹೋಗಿದ್ದ ಗಿಣಿಮರಿಯಂತೆ ಕಂಡೆ  ನೀನು
ಬರಿದಾದಂತೆ ತೋರುತ್ತಿತು ನನ್ನ ಕೈಗಳು
 ಖಾಲಿ ಕೈಯನ್ನೇ ನೋಡುತ್ತಾ ಕುಳಿತೆ ...
 ಅದು ನಿನಗಾಗಿ ಬರೆದಿತ್ತು
     ಈ ಕೊನೆಯ ಕವನ .........
  

ಶನಿವಾರ, ಜೂನ್ 14, 2014

ಒಲಿದು ಬಾ ಒಲವೆ........

ಬೊಗಸೆಯಲ್ಲಿ ಬಾಚಿ ತುಂಬಿಕೊಂಡಿರುವೆ ನಿನ್ನ ನಗುವನ್ನು
 ನನ್ನ ಹೃದಯದಲ್ಲಿ ....
ಕಣ್ಣಲ್ಲಿ ಕಣ್ಣಿಟ್ಟು ನೋಡು ಒಮ್ಮೆ
 ನನ್ನ ಕಣ್ಣಲ್ಲಿ ನಿನ್ನ ನಗುವಿನ ಪ್ರತಿಬಿಂಬ ...
ಒಲಿದು ಬಾ ಒಲವೆ
ಎದೆಯ ಗೂಡಲ್ಲಿಟ್ಟು ಪ್ರೀತಿಸುವೆ ನಿನ್ನನು
ನಿನ್ನ ನಗು ಮಾಸದಂತೆ ಸಾವಿರ ಜನ್ಮಕ್ಕೂ .........  

ಗುರುವಾರ, ಜೂನ್ 12, 2014

ಒಡತಿ

ಭುವಿಗೆ ಬೆಳದಿಂಗಳು ಚೆಲ್ಲುವ ಚಂದಿರನ 
ಮುಗುಳ್ನಗೆಯಂತೆ ನಿನ್ನ ನಗು ..... 

ಇಳೆಗೆ ಅಂದ ನೀಡುವ ಮಾರನ ಬಿಲ್ಲಿನಂತ ಹುಬ್ಬುಗಳು 
ಮಿಂಚಿ ಮರೆಯಾಗುವ ಕೊಲ್ಮಿಂಚಿನಂದದ ಕಣ್ಣೋಟ .. 

ತಂಗಾಳಿಗೆ ಅತ್ತಿಂದಿತ್ತ ತೂಗಾಡುವ ಬಳ್ಳಿಯಂತ ಮುಂಗುರುಳು 
ಸಂಪಿಗೆ ಹೂವಿನ ಅಂದಕ್ಕೆ ಸವಾಲೆಸೆಯುವ ನಿನ್ನ ನಾಸಿಕ 
ಗುಲಾಬಿ ಎಸಳಿನ ಕೆಂಪನ್ನೇ ಬಳುವಳಿ ಪಡೆದ ನಿನ್ನ ತುಟಿಗಳು ... 
ಬೆಲ್ಲದ ಸವಿಯನ್ನು ಮರೆಸುವ ನಿನ್ನ ಗಲ್ಲ 
ಕಿಲಕಿಲನೆ ನಗೆಯಲ್ಲಿ ಗುಳಿ ಬಿದ್ದ ಕೆನ್ನೆಯ ಕಂಡು ಮನಸೋತೆ ಓ ನನ್ನ ನಲ್ಲೆ .. !!

ಕನಸಲ್ಲೂ ಕಾಡುತ್ತಿದೆ ನಿನ್ನ ಮುಖ.......................
ನಾನೇನು ಹೇಳಲಿ ಗೆಳತಿ
ಮೌನಿ ನಾನಾದೆ ಪದಗಳನೆ ಮರೆತು ..!!!

ಬಾ ನನ್ನ ಹೃದಯದಂಗಳಕೆ ....
ಹೂವ ಚೆಲ್ಲಿ ಸ್ವಾಗತಿಸುವೆ
ನೀ ನಡೆವ ಹಾದಿಯಲ್ಲಿ ನಾನೇ ಹೂವಾಗುವೆ
ನಿನ್ನ ಪಾದದ ಅಡಿಯಲಿ ..... !
ಬಾ ನಲ್ಲೆ ಬಾ ............
ಹೃದಯ ಸಿಂಹಾಸನದ ಒಡತಿಯಾಗಿ ....... ಕಾಯುತ್ತಿರುವೆನು ..... !!!

ಬುಧವಾರ, ಮೇ 28, 2014

ಧೃವತಾರೆ

ನಿನ್ನೆ ನಿನ್ನ ಕಣ್ಣೋಟ ಕಂಡಾಗ ಹಿರಿ ಹಿರಿ ಹಿಗ್ಗಿದ್ದೆ
ಅದು  ನನಗೆ ಮೀಸಲೆಂದು ....
ಅನಿಸಿತ್ತು ನಿನಗೂ ಒಲವು ಮೂಡಿತೆಂದು ....
ಅದರೆ  ಅರಿತೆ ನಾನಿಂದು ....
ನಿನ್ನ ಕಿರುಗಣ್ಣಿನ ನೋಟವನ್ನು ನನ್ನೆಡೆ  ಎಸೆಯಲಿಲ್ಲ ...
ಅದು ಹುಡುಕುತಿತ್ತು ನಿನ್ನ ಮನದ ಇನಿಯನನ್ನು ..
ನನ್ನ ಒಲವನ್ನು  ತಿರಸ್ಕರಿಸಿ ....

ಆಗಲೇ ತಿಳಿದಿದ್ದು ನನಗೆ..........
ನೆಲದ ಮೇಲೆ ನಿಂತಿರುವ ಹುಡುಗ ನಾನು
ಧೃವತಾರೆ ಕೈಗೆ ಎಟುಕುವುದಿಲ್ಲವೆಂದು 

ಸೋಮವಾರ, ಮೇ 26, 2014

ನಿನ್ನ ಕುಡಿನೋಟ

ಮುದ್ದು  ಹುಡುಗಿ ....... !!!
ಮನಸ್ಸೋತೆ ನಾ ನಿನ್ನ ಮುದ್ದು ಮುಖವನ್ನು ಕಂಡಾಗ
ಕಣ್ಣಂಚಿನ ಕಿರುನೋಟ ನನ್ನೆದೆಯನ್ನು ನಾಟಿತ್ತು ಮನ್ಮಥನ ಬಾಣದಂತೆ
ಕಾರ್ಮೋಡ ತುಂಬಿದ್ದ ನನ್ನೆದೆಯ ಬಾಂದಳದಲ್ಲಿ ಕೋಲ್ಮಿಂಚಿನ ಬೆಳಕಂತೆ ಪಸರಿಸಿತ್ತು ನಿನ್ನ ಕಣ್ಣೋಟ ..!!
ಪರವಶನಾದೆನ ಆ  ಕಣ್ಣೋಟಕ್ಕೆನಿನ್ನ ಕಂಡ ಮೊದಲ ದಿನವೇ ..!!!

ಮನಸ್ಸೇಕೋ  ಮತ್ತೆ ಮತ್ತೆ ಸೋಲುತ್ತಿದೆ ನಿನ್ನ ಕುಡಿನೋಟ ಎದುರಿಸಲಾಗದೆ ...
ಆ ಸೋಲಿನಲ್ಲೂ  ಸುಖವ  ಹುಡುಕುತ್ತಿದದೆ ಈ ಹುಚ್ಚು ಮನಸ್ಸು.. !!
ಸಾವಿರ ಸಲ ಬೇಕಾದರೂ ಸೊಲುವೆನು ನಿನ್ನ ಕಣ್ಣೋಟ ಎದುರಿಸಿ
ಆ ಸೋಲಲ್ಲೂ ನನ್ನ ಗೆಲುವಿದೆ ನಿನ್ನ ಕಣ್ಣು ನನ್ನದಾಯಿತೆಂದು ... !!!

ಹುಚ್ಚು ಕುದುರೆಯಂತಾಗಿದೆ ಮನಸ್ಸು ನಿನ್ನ  ಕಣ್ಣೋಟದ  ದಾಳಿಗೆ ಸಿಲುಕಿ
ಬಾ ತಡೆದು ನಿಲ್ಲುಸು ಈ  ಮನಸ್ಸೆಂಬ ಹುಚ್ಚು ಕುದುರೆಯ ನಿನ್ನ ಭಾಹುಬಂದನದಲ್ಲಿ ...
ಶರಣಾಗುವೇನು ನಿನ್ನ ತೋಳಲ್ಲಿ  ನಿನ್ನ ಕಂಗಳನ್ನೇ ನೋಡುತ್ತಾ ... ..!!!
ಕೊನೆಯಲ್ಲೊಂದು ಸ್ವಾರ್ಥ ನೀ ಕೇಳು ಹುಡುಗಿ
     ನನಗಾಗೆ ಮೀಸಲಾಗಿರಲಿ ನಿನ್ನ ಕಣ್ಣೋಟ ಸಾವಿರ ಜನ್ಮಕ್ಕೂ ಓ ಗೆಳತಿ !!!!
 

ಭಾನುವಾರ, ಮೇ 18, 2014

ಕೊಚ್ಚಿ ಹೋದ ಮನಸ್ಸು

ಈ ರಾತ್ರಿಯಲ್ಲಿ ಸುರಿಯುತ್ತಿರುವ ಮಳೆಗೆ ಮೈಯೊಡ್ಡಿ ನಿಂತೆ ನೆನಪಾದೆ ನೀನು 
ಹೃದಯದ ಒಳಗೂ ಸುರಿಯಿತು ನೆನಪಿನ ಮಳೆ 
ಹಸಿಯಾಗಿ ಹೋಯಿತು ಮನಸ್ಸು 
ಗಟ್ಟಿಯಾಗಿಸಲು ಅದೆಸ್ಟೋ ಪ್ರಯತ್ನಿಸಿದೆ
ಕೊನೆಗೂ ಸೋತು ಹೋದೆ ..... 
ಬರುತ್ತಿರುವ ನೆನಪಿನ ಪ್ರವಾಹಕ್ಕೆ ಎದುರಾಗಿ ಈಜಲು ಸಾದ್ಯವೇ ... 
ನನಗೇ ಅರಿವಿಲ್ಲದಂತೆ ಎಲ್ಲಿಗೋ ಕೊಚ್ಚಿಕೊಂಡು ಹೋಗಿತ್ತು ನನ್ನ ಮನಸ್ಸು ದಡವನ್ನು ಹುಡುಕುತ್ತಾ...


ಶನಿವಾರ, ಮೇ 3, 2014

ಕಾದಿರುವೆ ನಿನಗಾಗಿ

ಮನಸ್ಸು ಯಾಕೋ ತೊಳಲಾಡುತ್ತಿದೆ ನಿನ್ನ ಕುಡಿ ನೋಟಕ್ಕೆ ಸಿಕ್ಕಿ.
ಮತ್ತೆ ಮತ್ತೆ ನಿನ್ನ ಕಣ್ಣಿಗೆ ನನ್ನ ಕಣ್ಣನ್ನು ನೆಡಬೇಕು ಅನ್ನುವ ನಿನ್ನ ಕಣ್ಣೋಟ
ಸಂಪಿಗೆ ಹೂವಿನ ಸೌಂದರ್ಯಕ್ಕೆ ಸವಾಲು ಹಾಕುವ ನಿನ್ನ ನಾಸಿಕ
ಗುಲಾಬಿಯ ಎಸಳನ್ನೇ ನಾಚಿಸುವ ನಿನ್ನ ತುಟಿಗಳು .
ಬಳ್ಳಿಯಂತೆ ಬಳಕುವ ನಿನ್ನ ನಡು
 ಹುಣ್ಣಿಮೆಯ ಚಂದಿರನನ್ನೇ ನಾಚಿಸುವ ನಿನ್ನ ನಗು
ಓ ಚೆಲುವೆ ಸಿಗಬಾರದೆ ಒಮ್ಮೆ ನೀ ನನ್ನ ಬಾಹು ಬಂದನಕ್ಕೆ ??
ಅಪ್ಪಿ ಮುದ್ದಾಡಬೇಕೆಂಬ ಹಂಬಲ ...
ತುಟಿಗೆ ತುಟಿ ಸೇರಿಸಿ ಮಧುವ ಹೀರಬೇಕೆಂಬ ಅಸೆ
ನಿನ್ನ ಕಾಲ ಮೇಲೆ ಮಲಗಿ ಹುಣ್ಣಿಮೆಯ ರಾತ್ರಿಯಲ್ಲಿ ಚಂದಿರನ ನೋಡುವ ಅಸೆ .....
ಬಾ ಚೆಲುವೆ ಕಾದಿರುವೆ ನಾ ನಿನಗಾಗಿ ... 




ಸೋಮವಾರ, ಏಪ್ರಿಲ್ 28, 2014

ಕಿವಿಗೆ ಜೇನು ತುಪ್ಪ ಹೊಯ್ದ ಹಾಗೆ ಅದಾಗ !!

ಮೊನ್ನೆ ಮೊನ್ನೆ ಆಟೋ ಒಂದರಲ್ಲಿ ಪ್ರಯಾಣಿಸುತ್ತಿದ್ದೆ , ಆಟೋ ಚಾಲಕನ ಬಳಿ ಹೀಗೆ ಮಾತಾಡುತ್ತಿರುವಾಗ ಅವನು ಕೇಳಿದ
 "ಯಾವ ಊರು ಸರ್ ನಿಮ್ದು " ???           ನಾನು ಸ್ವಲ್ಪ ಖುಷಿಯಲ್ಲೇ ಉತ್ತರ ಕೊಟ್ಟೆ --- "ನನ್ನದು  ಮಲ್ನಾಡ್---- ತೀರ್ಥಹಳ್ಳಿ ಅಂತ " ಅಂದೆ ----- ಅದಕ್ಕೆ ಅವನು ಹೇಳಿದ - ಏನ್ ಊರು ಸರ್ ನಿಮ್ಮದು !!! ನಾನು ನೋಡಿದೀನಿ , ಏನ್ ಮಳೆ ಸರ್ ನಿಮ್ಮೂರಲ್ಲಿ !!!
     ಅದೇನು ಹಸಿರು ಸರ್ ಅಲ್ಲಿ !!! ಜನಾನು ಎಷ್ಟು ಸಾಫ್ಟ್ ಸರ್ ನಿಮ್ಮೂರಲ್ಲಿ !! ನಿಜವಾಗಲು ನಿಮ್ಮೂರು ಸ್ವರ್ಗ ಎದ್ದ ಹಾಗೆ ಇದೆ ಸರ್"--- ಅಂದ..... ಒಂದು ಕ್ಷಣ ನನ್ನ ಕಿವಿಗೆ ಜೇನು ತುಪ್ಪ ಹೊಯ್ದ ಹಾಗೆ ಆಯಿತು ನೋಡಿ !!!!  ನಿಜ ಹೇಳ್ತಿನ್ರಿ  ಹೇಗೆ ಊರು ಬಿಟ್ಟು ಊರಿಗೆ ಬಂದಾಗ  ಇಲ್ಲಿನ ಜನ ನಮ್ಮೂರಿನ ಬಗ್ಗೆ  ಹೀಗೆ ಹೊಗಳಿದಾಗ ಆಗುವ ಖುಷಿ ,  ಯಾರೇ ಬಂದು ಎಸ್ಟೇ ಕೋಟಿ ಹಣ ಕೊಟ್ರು ಆಗಲ್ಲ ಕಣ್ರೀ   ..... ..... ಏನಂತೀರ ????

ಮಂಗಳವಾರ, ಏಪ್ರಿಲ್ 22, 2014



ಮೊನ್ನೆ  ದಿನ ಗೆಳೆಯನನ್ನು ಭೇಟಿಮಾಡಲು ಹೋಗುವ ಸಲುವಾಗಿ ಬಸ್ ಸ್ಟಾಪ್ ಒಂದರಲ್ಲಿ ಬಸ್ಸಿಗೆ ಕಾಯುತ್ತ ನಿಂತಿದ್ದೆ ..
ನನ್ನ  ಪಕ್ಕ ಪ್ರತಿಷ್ಟಿತ ಐ ಟಿ  ಕಂಪನಿಯ ಐಡಿ ಕಾರ್ಡ್ ಧರಿಸಿದ ವ್ಯಕ್ತಿಗಳು ಬಸ್ ಕಾಯುತ್ತ ನಿಂತಿದ್ದರು . ಬಸ್ ಯಾಕೋ  ಮುನಿಸಿಕೊಂಡಂತೆ ತೋರುತ್ತಿತ್ತು . ಎಷ್ಟು ಹೊತ್ತಾದರೂ ಹೊತ್ತಾದರೂ ನಾನು   ಕಾಯುತ್ತಿದ್ದ ನಂಬರ್ ನ ಬಸ್ ಬಂದೆ ಇರಲಿಲ್ಲ  ಅದೇ ಸಮಯಕ್ಕೆ  ಯಾರೋ ಅಜ್ಜಿಯೊಬ್ಬರು ಬಂದರು , ಎಡಗೈಯಲ್ಲಿ ಒಂದು ಬ್ಯಾಗ್ ಬಲಗೈಯಲ್ಲಿ ಒಂದು ಸಣ್ಣ ಚೀಟಿಯನ್ನು ಹಿಡಿದಿದ್ದರು . ಅಲ್ಲಿ ಪ್ರತಿಷ್ಟಿತ ಕಂಪನಿ ಐಡಿ ಕಾರ್ಡ್  ದರಿಸಿದ್ದವರ ಬಳಿ ಅಜ್ಜಿ ಏನನ್ನೋ ಕೇಳುತ್ತಿದ್ದರು , ಅದಕ್ಕೆ ಅವರು  ಅಗುವುದಿಲ್ಲವೆಂಬಂತೆ ದೂರ ಸರಿಯುತ್ತಿದ್ದರು . ಒಂದು ಕ್ಷಣ ಅಜ್ಜಿ ಅಸಹಾಯಕರಾಗಿ ನಿಂತು ಬಿಟ್ಟರು .

ಹತ್ತಿರ ಹೋಗಿ ಏನಾಯಿತು ಅಜ್ಜಿ ಅಂತ ಕೇಳಿದೆ ?? ಅದಕ್ಕವರು " ಮಗ ನಮ್ ಹಳ್ಳಿ ಇಂದ ಮಗನ ಮನೆಗೆ ಬಂದೆ ಇಳಿಯುವ ಸ್ಟಾಪ್ ಗೊತ್ತಾಗದೆ ಎಲ್ಲಿ ಇಳಿದುಬಿಟ್ಟೆ , ಮಗನ ಮನೆಗೆ ಹೋಗಲು ಗೊತ್ತಾಗುತ್ತಿಲ್ಲ ದಯವಿಟ್ಟು ಈ ನಂಬರ್ ಗೆ ಫೋನ್ ಮಾಡಿ ಕೊಡ್ತಿಯ ನಿನ್ ಮೊಬೈಲಿಂದ" ಅಂತ ಅವರ ಕೈಲಿದ್ದ ಚೀಟಿ ನಂಗೆ ಕೊಟ್ಟರು.

ಅವರ ಮಗನಿಗೆ ಫೋನ್ ಮಾಡಿದೆ ವಿಷಯವನ್ನು ವಿವರಿಸಿ , ಅವರ ಮನೆಯ ಅಡ್ರೆಸ್ ತಿಳಿದು ಅಜ್ಜಿಯನ್ನು ಸರಿಯಾದ ಬಸ್ ಹತ್ತಿಸಿದೆ !!
ಬಸ್ ಹತ್ತುವಾಗ  " ನೂರು ವರ್ಷ ರಾಜನ ಹಾಗೆ ಬಾಳು ಮಗ " ಅಂತ ಆಶೀರ್ವದಿಸಿದರು . ಕೆಲವು ತಿಂಗಳ ಹಿಂದೆ ತೀರಿಹೋದ ನನ್ನ ಅಜ್ಜಿಯ ನೆನಪಾಗಿ ಎರಡು ಹನಿ ಕಣ್ಣಿರು ಬಂದಿದ್ದು  !!  ಅ ಅಜ್ಜಿ ಸಂತೋಷದಿಂದ ಬಸ್ ಹತ್ತಿ ಮಗನನ್ನು ಕಾಣುವ ತವಕದಲ್ಲಿದ್ದರು .

ಸಂಭಂದವೇ ಇಲ್ಲದವರು ಅನಿರಿಕ್ಷಿತವಾಗಿ ಸಿಕ್ಕಿ ಬಹಳ ಕಾಲ ಮನಸ್ಸಿನಲ್ಲಿ ಉಳಿಯುತ್ತಾರೆ !!
 ಕೊನೆಯಲ್ಲಿ ಕಾಡಿದ ಪ್ರಶ್ನೆ  ಪ್ರತಿಸ್ತಿತ  ಕಂಪನಿ ಸೇರಿದರೆ ಅಪರಿಚಿತರಿಗೆ ಸಹಾಯ ಮಾಡಬಾರದು ಅಂತ ಕಾನೂನು ಏನಾದ್ರು ಇದೆಯೇ ???? ಅಥವಾ ಪರೋಪಕಾರ , ಅಪರಿಚಿತರಿಗೆ ಸಹಾಯ ಮಾಡುವ ಗುಣ ಮರೆಯಾಗಿ ಹೋಯ್ತಾ ಇಂದಿನ  ಜನಾಂಗಕ್ಕೆ ????

ಭಾನುವಾರ, ಏಪ್ರಿಲ್ 13, 2014

        ಮನಸಾರೆ ಮರೆಯುವ ಮುನ್ನ
ಒಮ್ಮೆ ನೀ ಬಾರೆ
ಮಾತು ಮೌನಕ್ಕೆ ತಿರುಗುವ ಮುನ್ನ
ಒಮ್ಮೆ ನೀ ಮಾತಾಡೆ
ದೂರ ಸರಿಯುವ ಮುನ್ನ
ಒಮ್ಮೆ ತಿರುಗಿ ನೀ ನೋಡೆ
ಇಷ್ಟು ಸಾಕು ನೀ ಬದುಕಿರುವೇ
ನನ್ನಲ್ಲಿ 'ಖುಷಿ'ಯಾಗಿ.....

ಮಂಗಳವಾರ, ಏಪ್ರಿಲ್ 8, 2014

ಮನಸ್ಸ್ಯಾಕೊ  ನನ್ನೋಳಗಿಲ್ಲ
ಎದೆಯಲ್ಲಿ ನಿನ್ನ ನೆನಪೇ ಎಲ್ಲಾ
ನಿನಗ್ಯಾಕೋ ಇದರ ಪರಿವೆ ಇಲ್ಲ
ನೀನಿಲ್ಲದೆ ನಾನಿಲ್ಲ
ಕ್ಷಣವಾದರೂ ನೆನಪಾಗುತ್ತೀನ ನಾ ನಿನಗೆ  ಇಂದು  ನಾಳೆಯಲ್ಲ ?????

ಶುಕ್ರವಾರ, ಏಪ್ರಿಲ್ 4, 2014

ನಾನು ಅವನಾದಾಗ ....... !!!

ಮುಸ್ಸಂಜೆ ಹೊತ್ತು  P  G  ಬಾಲ್ಕನಿ ಲಿ ಒಬ್ಬನೇ ನಿಂತಿದ್ದೆ .....  ಮನಸ್ಸು ಯಾಕೋ ಮಂಕಾಗಿತ್ತು ..... ಒಂಟಿತನ ಬಯಸಿತ್ತು . 
 ಯಾರಲ್ಲೂ ಹೇಳಿಕೊಳ್ಳಲಾಗದ ನೋವು ಮನಸಲ್ಲಿ ಮನೆ ಮಾಡಿತ್ತು .  
 ಬೇಡ  ಬೇಡವೆಂದರೂ ಮನಸ್ಸು ಹಳೆಯ  ನೆನಪುಗಳತ್ತ ಓಡಿತ್ತು ..... 

ಆಕಸ್ಮಿಕವಾಗಿ ನೀ ನನಗೆ ಪರಿಚಯವಾಗಿದ್ದೆ , ಒಂದೇ ಊರಿನವರು ಎಂಬ ಕಾರಣಕ್ಕೆ ಆತ್ಮೀಯತೆ ಹೆಚ್ಚಾಗಿಯೇ ಇತ್ತು . 
ಪಕ್ಕದ ಮನೆಯವರೆ ಅಪರಿಚಿತರಗಿರುವ ಈ ಬೆಂಗಳೂರಿನಲ್ಲಿ ನಿನ್ನ ಗೆಳೆತನ ಸಿಕ್ಕಿದ್ದು ಮರುಭೂಮಿಯಲ್ಲಿ ಓಯಾಸಿಸ್ ಸಿಕ್ಕಿದಂತಗಿತ್ತು ಕಣೆ 
 ಮುಂಗಾರಿನ ಮೊದಲ ಹನಿಗಳಂತೆ ಪಟ ಪಟನೆ ನೀನಾಡುತತಿದ್ದ ಮಾತು , ಕಿಲ ಕಿಲನೆ ನಗುತ್ತಿದ್ದ ನಿನ್ನ ನಗು ,ತಟ್ಟನೆ ತೋರುತ್ತಿದ್ದ ಹುಸಿ ಕೋಪ ಎಲ್ಲವು ಕನಸಲ್ಲೂ ಬಂದು ಕಾಡಿತ್ತು ನನಗೆ .... 

 ಮೊದ ಮೊದಲು ಕೇವಲ ಸ್ನೇಹಿತರಾಗಿ ಅಪರೂಪಕ್ಕೆ ಅಲ್ಲಿ ಎಲ್ಲಿ ಸಿಗ್ತಾ ಇದ್ವಿ !!!
ಒಂದು ಕಪ್ ಕಾಫಿ ಗೆ ನಮ್ಮ ಬೇಟಿ ಮುಗಿದಿರುತ್ತಿತ್ತು ....!!!

ನಮ್  ಗೆಳೆತನ ಅಷ್ಟಕ್ಕೆ ಇದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಲ್ವಾ ????

ಆದ್ರೆ .... 

ನನಗೆ ಅರಿವಿಲ್ಲದಂತೆ ನಿನ್ನ ಆ ನಗುವಿಗೆ ನನ್ನ ಮನಸ್ಸು ಕ್ಲೀನ್ ಬೋಲ್ಡ್ ಆಗಿತ್ತು . 
ನಿನ್ನ ಮನವು ನನ್ನ ಸಾಮಿಪ್ಯ ಬಯಸುತ್ತಿತ್ತು ... 

ನಂಗೆ ಇನ್ನು ಚೆನ್ನಾಗಿ ನೆನಪಿದೆ ಕಣೆ , ಒಂದು ದಿನ  ರಸ್ತೆ ದಾಟುವಾಗ ಮಗುವಂತೆ ನನ್ನ್ನ ಕೈ ಹಿಡಿದು ನೀನು  ನಡೆದಿದ್ದೆ... !!!
ಅಂದೇ ನನ್ನ ಮನಸ್ಸು  ತೀರ್ಮಾನಿಸಿತ್ತು , ಜೀವನ ಪೂರ್ತಿ ಹಾಗೆ ಕೈ ಹಿಡಿದು ನಡೆಯಬೇಕೆಂದು ..... 
ನನ್ನ ಮನದಾಸೆ ನಿನ್ನ ಬಾಯಲ್ಲಿ ಬಂದಾಗ ನಾನು ಅಕ್ಷರಶಃ ಮೂಕನಗಿದ್ದೆ , ಮನಸ್ಸು ಖುಷಿಯಲ್ಲಿ ಹಾರಡಿತ್ತು !!!


ನಿನ್ನದು ಮಗುವಿನಂತ ಮನಸ್ಸು ಕಣೆ ! ಚಿಕ್ಕ ಪುಟ್ಟ ವಿಷಯಗಳಿಗೂ ಕೋಪ ಅಚ್ಚರಿ ನಿನ್ನಲ್ಲಿರುತ್ತಿತು .... 
ಒಂದು ಲೋಟ ಕಾಫಿ ಗೆ ಅದೆಸ್ಟು ಸಲ ನನ್ನ ಮೇಲೆ ಹುಸಿ ಕೋಪ ತೋರಿಸಿದ್ದೆ , ಒಂದು ಪ್ಲೇಟ್ ಪಾನಿ ಪೋರಿಗೆ ಎಷ್ಟು ರಂಪಾಟ ಮಾಡಿದ್ದೆ ಮಗು ತರ ...! ಆದರೆ ಮರುಕ್ಷಣದಲ್ಲಿ sorry ಕಣೋ ಎಂದು ಹೇಳುವಾಗ ನಿನ್ನ ಕಣ್ಣಂಚಲ್ಲಿ ಕಣ್ಣೇರು ಜೆನುಗುತ್ತಿರುತ್ತಿತ್ತು ..... "ಹೋಗ್ಲಿ ಬಿಡು ಬಂಗಾರಿ " ಎಂದಾಗ ಕಿಲ ಕಿಲನೆ ನಕ್ಕು ಮೊದಲಿನಂತಗುತ್ತಿದ್ದೆ ... 

ಅದೆಲ್ಲ ಕೇವಲ ನೆನಪಾಗಿ ಉಳಿದಿದೆ ಅಸ್ಟೆ ..!!!

ನೀನು ಬಿಟ್ಟು ಹೋದ ಮೇಲಂತೂ ಮನಸ್ಸು ಮೌನಕ್ಕೆ ಶರಣಾಯಿತು .... 
ಯಾವುದಕ್ಕೂ ಅಳದ ಹುಡುಗ ನಾನು ಆದರೆ ನಿನಗಾಗಿ ಹಲವು ರಾತ್ರಿ ನಿದ್ದೆ ಇಲ್ಲದೆ ಬಿಕ್ಕಳಿಸಿ ಅತ್ತಿದ್ದೆ .. ಆದರೆ ನನ್ನ ಮನದ ಹಕ್ಕಿಯ ರೋದನೆ ನಿನಗೆ ಕೆಳದಾಯಿತು .... 

ಹೋಗ್ಲಿ ಬಿಡು ...... ಎಲ್ಲವು ಹಣೆಬರಹ ... !!!

ಯಾವಾಗಲು ನೀನು ಹೇಳುತ್ತಿದ್ದ ಮಾತು " ನಮ್ಮ ಜೀವನದಲ್ಲಿ ಯಾರು ಕೊನೆ ತನಕ ಬರಲ್ಲ ಕಣೋ ".  ಇ ಮಾತಿನ ಸಂಪೂರ್ಣ ಅನುಭವ ನನಗಾಯಿತು .  ಆದ್ರೆ ನನ್ನ ಜೀವನದ ಕೊನೆವರೆಗೂ ಬರೋಕ್ಕೆ ನೀ ಬಿಟ್ಟು ಹೋದ ನೆನಪುಗಳ ಬುತ್ತಿ ಇದೆ ಕಣೆ ..!!

ಹೊಸಬರೊಂದಿಗೆ ಹೊಸ ಜೀವನ ಆರಂಬಿಸುವ ಅಂಚಿನಲ್ಲಿ ನೀನಿದ್ಯ ..... ಆಲ್ ದಿ ಬೆಸ್ಟ್ !! ಜೀವನದಲ್ಲಂತೂ ನೀನು ನಂಗೆ ಸಿಗ್ಲಿಲ್ಲ ... ! 
ಆದ್ರೆ ದಿನಾ ನನ್ನ ಕನಸಿನಲ್ಲಿ ರಾಜಕುಮಾರಿ ಹಾಗೆ ಬರೋ ನಿಂಗೆ ನಾನೆ ರಾಜಕುಮಾರ ಆಗಿರಬೇಕು ಅನ್ನೋ ಆಸೆ ನನ್ನದು.. 
ಬರ್ತೀಯ ಅಲ್ವಾ ...??  ಪ್ಲೀಸ್ ಈ ನನ್ನ ಒಂದು ಚಿಕ್ಕ ಆಸೇನಾದ್ರು ಪೂರೈಸು .!! ಕನಸಲ್ಲಾದರೂ ಜೊತೆಯಾಗಿ ಬಾಳೋಣ ..!!! 


ಅದ್ರೂ ನನ್ನ ಮನಸಲ್ಲಿ ಒಂದು ಪ್ರಶ್ನೆ ಕಾಡ್ತಾ ಇದೆ ಕಣೆ ..
 
"ನಿನ್ನೆ ಮೊನ್ನೆವರೆಗೂ ನೀನೆ ನಂಗೆ ಎಲ್ಲ ಅಂತ ಹೇಳ್ತಿದ್ದೊಳು ..  ಅದು ಹೇಗೆ ಎಷ್ಟು ಬೇಗ ಬೇರೆಯವರ ಮನದರಸಿ ಆಗೋಕೆ ಒಪ್ಪಿದೆ ....????"

ನಂಗೆ ಗೊತ್ತು ಈ ಪ್ರಶ್ನೆಗೆ ಉತ್ತರ ಸಿಗೋಲ್ಲ ಅಂತ ....!!   


ಬುಧವಾರ, ಮಾರ್ಚ್ 12, 2014

ನಾ ಕಂಡ ಕನಸು - 1

ಒಬ್ಬನೇ ಹುಚ್ಚನಂತೆ ಅಲೆದಿದ್ದೆ  ಬನಶಂಕರಿಯ ಬೀದಿಯಲ್ಲಿ
ಚದುರಿಹೋದ ಕನಸುಗಳನ್ನು ಹೆಕ್ಕುತ್ತ.....

ಬರಿದಾಗಿ ತೋರುತ್ತಿತು ನೀನಿಲ್ಲದ ಆ ಅಲೆದಾಟ ..
ಅಂದು ಜೊತೆಯಾಗಿ ನಡೆವಾಗ ...
ನೀ ಹಿಡಿದಿದ್ದ ನನ್ನ ಎಡಗೈ ಕಿರು ಬೆರಳನ್ನೇ ನೋಡುತ್ತಾ
ಇಂದು ನಾ ನಡೆದಿದ್ದೆ  ಗೊತ್ತು ಗುರಿ ಇಲ್ಲದವನಂತೆ ..
ಬೀಸುವ ತಂಗಾಳಿಯು ಬರ ಸಿಡಿಲಿನಂತೆ ಬಾಸವಾಗಿತ್ತು ಇಂದು

 ಕಣ್ಣು ಮುಚ್ಚಿದಾಗ ಸವಿಗನಸಂತೆ ಹಾದು ಹೋಗಿತ್ತು ಆ ದಿನಗಳು .

ಕೈ ಹಿಡಿದು ನಡೆದಿದ್ದು,  ಒಟ್ಟಾಗಿ ಹೀರಿದ ಅಡಿಗರ ಹೋಟೆಲಿನ ಕಾಫಿ
 ಸಂಜೆ ಹೊತ್ತಿನಲ್ಲಿ ಹಂಚಿಕೊಂಡು ತಿಂದಿದ್ದ ಪಾನಿಪೂರಿ.
ಹೇಳಲು ಹೊರಟರೆ ಒಂದೇ....  ಎರಡೇ.... ವರ್ಷ ಪೂರ್ತಿ ಖುಷಿಯಲ್ಲಿ ಮಿಂದ ನೆನಪುಗಳು ...


ಕಣ್ಣು ಬಿಟ್ಟಾಗ ಮತ್ತದೇ ಕಂಡಿತ್ತು ನೀ ಜೊತೆ ಇಲ್ಲದ ಒಂಟಿ ದಾರಿ

ನಿಂತಿದ್ದೆ ನಾನು ಗುರಿ ಮರೆತ ಏಕಾಂಗಿ ಪಯಣಿಗನಂತೆ

ನನ್ನಲ್ಲಿ ಉಳಿದಿತ್ತು ....... ನಿನ್ನ ನೆನಪುಗಳು ... 
ನನ್ನ  ನೀರವ ಮೌನ ..... ನಿಟ್ಟುಸಿರು ..............  



ಬುಧವಾರ, ಜನವರಿ 8, 2014

23 To 27 ರ ತನಕ ಹುಡುಗರ ಲೈಫ್.......

ಎಜುಕೇಶನ್ ಮುಗಿದು ಕೆಲಸಕ್ಕಾಗಿ ಅಲೆದಾಟ ,ವಿದ್ಯೆಗೆ ಸರಿಯಾಗಿ ಸಿಗದ ಕೆಲಸ  ಅಲೆದು ಅಲೆದು ಸುಸ್ತಾದ ಜೀವ ಬರಿದಾದ ಜೇಬು ಸವೆದ ಚಪ್ಪಲಿಗಳು . 
 ಮನೆಯಲ್ಲಿ ಖರ್ಚಿಗೆ ಹಣ ಕೇಳೋಣವೆಂದರೆ ಏನೋ ಮುಜುಗರ ಕೇಳಲು ,ಕೇಳದೆ ಇದ್ದರು ಖರ್ಚಿಗೆ ದುಡ್ಡು ಕೊಡುವ ಅಪ್ಪ ಮಗನಿಗೆ ಬೇಗ ಕೆಲಸ ಸಿಗಲಿ ಎಂದು ದಿನಾ ದೇವರಲ್ಲಿ ಬೇಡುವ ಅಮ್ಮ ಕೆಲಸ ಸಿಕ್ಕಿದ ಮೇಲೆ ಅದು ಬೇಕು ಎದು ಬೇಕು ಕೊಡ್ಸು ಅನ್ನುವ ತಮ್ಮ ತಂಗಿ ..... 
 ಯಾರೇ ನೆಂಟರ ಮನೆಗೆ ಹೋದರು ಕೆಲಸ ಸಿಕ್ಕಿತ ? ಎಷ್ಟು ಸಂಬಳ ಅಂತ ಕೇಳುವವರೇ ಹೊರತು ಕೆಲಸ ಕೊಡಿಸುವ ಮನಸ್ಸು ಯಾರಿಗೂ ಇರುವುದಿಲ್ಲ....   ಸಿಕ್ಕಿಲ್ವಂತೆ ಅನ್ನೋ ಮಾತು ಬಿಟ್ರೆ ಬೇರೆ   ಏನು ಸಿಕ್ಕೊಲ್ಲ .!!!!
c ಇದೆ ಸಮಯಕ್ಕೆ ಸರ್ಯಾಗಿ ಹುಡುಗರು ಇಷ್ಟ  ಪಟ್ಟ ಹುಡ್ಗಿಯ ಮನೆಯಲ್ಲಿ ಅವಳಿಗೆ ಬೇರೆ ಗಂಡು ಹುಡುಕಿ ಮದುವೆಯ ತಯಾರಿಯು ಶುರುವಾಗಿರುತ್ತೆ  ..ಹೋಗಿ  ಮಾತಾಡೋನಾ  ಎಂದುಕೊಂಡರೆ ಕೆಲಸ ಸಿಕ್ಕಿಲ್ಲ ಅನ್ನೋ ಹಣೆ ಪಟ್ಟಿ  .... ಮಗಳನ್ನು ಹೇಗೆ ಸಾಕುತ್ತಿಯ ಎಂದು  ಎದುರಾಗೋ ಪ್ರಶ್ನೆಗೆ ಮೌನವೇ   ಉತ್ತರ ...!!! ...
                       ಖರ್ಚಿಗೆ ಕಾಸಿಲ್ಲ ಕೈಲಿ ಕೆಲಸ ಇಲ್ಲ ಇಷ್ಟ ಪಟ್ಟ ಹುಡುಗಿ ಸಿಕ್ಕಿಲ್ಲ 
...ಇಷ್ಟೆಲ್ಲಾ ಇದ್ರು ಹುಡ್ಗುರ ಲೈಫ್ ಲಿ ... ಅವರ ಪಾಲಿಸಿ ಒಂದೇ ಅದು ....   ಏನೇ ಅದ್ರು ಡೋಂಟ್ ವರಿ ಯಾರೇ ಸಿಕ್ರು ಹಲ್ಲು ಕಿರಿ ...!!!!....... hats off ma dost...