ಶುಕ್ರವಾರ, ಜುಲೈ 6, 2012

ಅಮ್ಮ ನಿನಗಾಗಿ

ಈ ಜಗದ ಬೆಳಕ ಕಂಡೆ ನಾನು ..
ಅವಳ ನವಮಾಸದ ನೋವಿನಿಂದ ..!!!
ನಾ ಕುಡಿದಿದ್ದು ಬರಿ ಹಾಲಲ್ಲ ...
ಪ್ರೀತಿ ಮಮತೆ ತುಂಬಿ ನೀಡಿದ ಅಮೃತ ....!

  ನಾ ನಕ್ಕಾಗ ಜಗತ್ತನ್ನೇ ಮರೆತಳು ಅವಳು 
ನಡೆವಾಗ ಹಿಡಿದು ನಡೆಸಿದಳು ನನ್ನನ್ನ ..
ಅತ್ತಾಗ ಕಣ್ಣೀರು ಒರೆಸಿದ್ದು ಅವಳ ಸೆರಗಿನ ಅಂಚು ...
ದಣಿದಾಗ ಅಸರೆಯಗಿದ್ದು  ಅಮ್ಮನ ಮಡಿಲು ...
ನಾನು ಗೆದ್ದಾಗ ನಕ್ಕಳು ಸೋತಾಗ ಸಂತೈಸಿದಳು ..!!
ನನ್ನ ಅಮ್ಮ .................................................
ಸಾವಿರ ಜನ್ಮ ನಿನಗೆ ಋಣಿಯಾಗಿರುವೆ .............
I LOVE YOU AMMA................................


                                                                   @:::ಅವಿನಾಶ್ 

ಗುರುವಾರ, ಜುಲೈ 5, 2012

ಮುಸ್ಸಂಜೆಯಲ್ಲಿ ನೆನಪದವಳು

ಈ ಸಂಜೆಯ ತಂಪಾದ ತಂಗಾಳಿಗೆ .........
ಮೈಯೊಡ್ಡಿ ಬಹುದೂರ ಸಾಗಿಬಂದಿರುವೆ ಒಂಟಿಯಾಗಿ .
ಈ ಖಾಲಿ ರಸ್ತೆಯಲ್ಲಿ ...!!

ನೆನಪಾಗುತಿದೆ ಆ ಸಂಜೆ,
ನಿನ್ನೊಂದಿಗೆ ಗಂಟೆಗಟ್ಟಲೆ ಮಾತಾಡಿದ ಮದುರ ಕ್ಷಣಗಳು
ನನ್ನ ಕಿವಿಗೆ ಬಿದ್ದ ನಿನ್ನ ತುಂಟ ನಗು ಪ್ರತಿದ್ವಾನಿಸುತಿದೆ
ಎಂದಿಗೂ ನನ್ನ ಹೃದಯದಲಿ,ನೀನಿಲ್ಲದ ಹೊತ್ತಿನಲ್ಲಿ !

ಎಷ್ಟು ಚೆಂದ ?
ಹಿಂತಿರುಗಿ ಬಂದರೆ ಆ ಮದುರ ಘಳಿಗೆ ...!!!!!
ನೆನಪಾಗದೆ ನಿನಗೆ ಆ ನಲ್ಮೆಯ  ಕ್ಷಣ ???
ಎಷ್ಟು ದಿನ ಕಾಯಲಿ ನಾ ?
ಹೀಗೆ ವಿರಹಿಯಾಗಿ!
ಬಾ ಗೆಳತಿ ........
ಈ ತಂಗಾಳಿಯಲ್ಲಿ ಕೈ ಹಿಡಿದು ಸಾಗೋಣ 
ಪ್ರೀತಿಯ ತೀರಕ್ಕೆ.............!!!!!
ಕನಸಿನ ಊರಿಗೆ .............!!!!!
                                                               @......ಅವಿನಾಶ್ 

ಮೌನದ ಅಲೆ

ಮನವೆಂಬ ಕಡಲಲ್ಲಿ ಮತ್ತೆ ಮತ್ತೆ
                ತೇಲಿ ಬರುತಿದೆ
ನಿನ್ನ ನೆನಪೆಂಬ ಅಲೆ
                 ಪ್ರತೀ ಅಲೆಯಲ್ಲು ನಾ ಕಂಡೆ
ನಿನ್ನ ನಗು .ನಲ್ಮೆಯ ನುಡಿ..
                  ಹಿಂತುರಿಗಿ ಹೋದರು ಮತ್ತೆ ಬಂದು ಅಪ್ಪಳಿಸುತಿದೆ
ಅಲೆಗಳು ಒಡೆದ ಈ ಹೃದಯಕ್ಕೆ ..
                    ಭೋರ್ಗರೆಯುವ ದುಃಖದ ಕಡಲಿನಲ್ಲಿಯೂ
ನನ್ನಲ್ಲಿ ಉಳಿದಿದ್ದು ನಿನ್ನ ನೆನಪೆಂಬ
                                            ನೀರವ ಮೌನ ಮಾತ್ರ ..............
                                                                                            @ಅವಿನಾಶ್ 

ಸೋಮವಾರ, ಜುಲೈ 2, 2012

ಅವಳು ಬರೆದ ಸಾಲು

ನನ್ನೆದೆಯ ಹಾಳೆಯಲ್ಲಿ ಉಳಿದಿದ್ದು
    ಕೇವಲ ನೀ ಗೀಚಿಹೋದ ಸವಿ ನೆನಪುಗಳು ..
ಎಷ್ಟು ತಿರುವಿದರು ಮುಗಿಯದ ನೆನಪಿನ ಪುಟಗಳಲ್ಲಿದೆ 
    ನೀನಿಲ್ಲದ ನಿನ್ನ ನೆನಪುಗಳು ಮಾತ್ರ ....
                                                                  @..ಅವಿನಾಶ್ 

ಜೀನುಗೂಡಿನಲ್ಲಿ

ನಿನ್ನ ಆ ಮೋಹಕ ನಗುವಲ್ಲಿ .
ಕಂಡೆ ನಾ ಸುಂದರ ನಾಳೆಗಳನ್ನು .
ಒಟ್ಟಾಗಿ ಬಾಳೋಣ ಬೆರೆತು 
ಹಾಲು ಜೀನಿನಂತೆ ಬದುಕೋಣ 
ಪ್ರೀತಿ ತುಂಬಿದ ಪುಟ್ಟ ಗೂಡಿನಲ್ಲಿ 
ಕಾಯುವೆ ನಿನ್ನನು ಗುಬ್ಬಿಮರಿಯಂತೆ 
ಆ ಗೂಡಿನಲ್ಲಿ ..
ನನ್ನ ಕನಸನ್ನು ಕನಸಾಗಿಯೇ ಉಳಿಸದೆ 
ನನಸಾಗಿಸು ಗೆಳತಿ ...
                                                      @ಅವಿನಾಶ್ 

ನಾನು ನನ್ನ ಕನಸು

ನೆನಪಾದೆ ನೀ ಗೆಳತಿ ....
ನಿದ್ರೆ ಬರದ ನಡುರಾತ್ರಿಯಲ್ಲಿ
ಕಣ್ಣು ಮುಚ್ಚಿದರೆ ಕಾಣುತ್ತಿದೆ ನಿನ್ನ ಆ ತುಂಟ ನಗು .
ಕಿವಿಯಲ್ಲಿ ಪಿಸುಗುದುತ್ತಿದೆ ನಿನ್ನ ನಲ್ಮೆಯ ಮಾತು ..
ಪ್ರೀತಿ ಅಂದ್ರೆ ಇದೇನಾ ..........            
                                                      @.......ಅವಿನಾಶ್              

ಗೆಳತಿ ನಿನಗಾಗಿ

ಅಂದು ನಾ ಕಂಡೆ ಗೆಳತಿ ನಿನ್ನ ತುಟಿಯಂಚಿನ ತುಂಟ ಕಿರುನಗೆ ...
           ಬೀಸಿತು ಹೃದಯದಲಿ ಒಲವೆಂಬ ತಂಗಾಳಿ .....
ನಾ ಬಯಸಿ ಬಂದೆ ನಿನ್ನೊಲವ ...
           ದೂರ ಸರಿದೆ ನೀ ಗೆಳತಿ ಕೊಟ್ಟು ಕಾರಣ ಕೆಲವು ...
ಮರೀಚಿಕೆಯಗಬೇಡ ನನ್ನ ಈ ಪುಟ್ಟ ಹೃದಯಕೆ ಗೆಳತಿ ......
                               ನೀಡು ಬಾ ಒಲವನ್ನು
                               ನೀ ಬಂದು ಸನಿಹ ........    
                                                                     @.....ಅವಿನಾಶ್