ಬುಧವಾರ, ಜನವರಿ 23, 2013

ನೆನಪು

ಒತ್ತರಿಸಿ ಬರುತಿದೆ ಗೆಳತಿ 
ಎದೆಯೊಳಗೆ ಬೆಚ್ಚಗಿರುವ ನಿನ್ನ ನೆನಪು 
ಹೃದಯದಲಿ ಭೋರ್ಗರೆಯುತಿದೆ ನಿನ್ನ ನಗು 
ತೊಯ್ದು ಹೋಗಿದೆ ನನ್ನ ತನು ಮನ 
ಆ ನಿನ್ನ ನೆನಪುಗಳಲ್ಲಿ ..............
ಉಳಿವೆಯಾ ?
ಕೇವಲ ನೆನಪಿನದೂಣಿಯಲಿ 
ಬರುವೆಯಾ?
ನನ್ನ ಜೀವನದ ಪಯಣದಲ್ಲಿ 
ಸಹಪ್ರಯಾಣಿಕಳಾಗಿ...!!!!!!!!!!!!

ಗೆಳತಿ ನೀ ನೆನಪಾದಾಗ ...

ನನ್ನೀ ಹೃದಯದಲಿ ಹುದುಗಿದೆ 
     ನಿನ್ನ ನೂರೊಂದು ನೆನಪುಗಳು 
ಮರೆಯಬೇಕೆಂದರು ಮತ್ತೆ ಮತ್ತೆ ಬರುತಿದೆ 
ಆ ಮದುರ ನೋವು 
ನನ್ನ ಜೀವನದ ಕೆಲ ಕ್ಷಣಗಳಲಿ 
ಪ್ರೀತಿಯೆಂಬ ಮಿಂಚು ಹರಿಸಿ ಮಾಯವಾದೆ ನೀ ......
ನನ್ನ ನೆನಪಿನಲ್ಲುಳಿದ 
ನೆನಪುಗಳ ಸಂಗತಿಯೇ 
ನನ್ನಲ್ಲಿ ನೀ ಬಿಟ್ಟ ನಿನ್ನ ನೆನಪುಗಳಿಗೆ ...............
hats off..