ಈ ನೆನಪು ಅನ್ನೋದು ಹಿಂಗೆ ಅಲ್ವಾ ?? ಬೆಂಗಳೂರಿನ ಬಿಸಿ ಬಿಸಿ ಬಿಸಿಲಿನ ಮಧ್ಯದಲ್ಲಿ ಕೆಲವೊಮ್ಮೆ ಬೀಸೋ ತಂಗಾಳಿ ತರ.... ಬೀಸೋದು ಸ್ವಲ್ಪ ಹೊತ್ತು ಆದ್ರು ಮನಸಿಗೆ ತುಂಬಾ ಖುಷಿ ಕೊಡತ್ತೆ ....... ..
ಈ ಬೆಂಗಳೂರಿಗೆ ಬಂದು ಹಾಗೋ ಹೇಗೊ ಎರಡು ವರ್ಷ ಆಗಿ ಹೋಯ್ತು .. ..ನಮ್ಮುರಲ್ಲ್ಲಿ ಇದ್ದಾಗ ಅದರ ಬೆಲೆ ಗೊತ್ತಾಗಲ್ಲ ಊರು ಬಿಟ್ಟು ಊರಿಗೆ ಹೋದಾಗಲೇ ನಮ್ಮುರೆ ನಮಗೆ ಚೆಂದ ಅನ್ನಿಸೋದು
ದೊಡ್ಡ ದೊಡ್ಡ ಬಿಲ್ಡಿಂಗ್. ಹೆವಿ ಟ್ರಾಫಿಕ್ . ಸಿಗ್ನಲ್ಲಲ್ಲಿ ನಿಂತಾಗ ಕಿವಿ ಕೆತ್ತುಹೊಗೋ ಹಾರನ್ ಗಳು . ಮಾಲ್ ಗಳು. ಮಿರಿ ಮಿರಿ ಮಿಂಚೋ M G ರೋಡ್ ಕಲರ್ ಗಳು . ದಿನ ಬೆಳಗಾದ್ರೆ ಎದ್ದು ಯಾವನ್ ಹೋಗ್ತಾನೆ ಅಂತ ಬೈಕೊಂಡ್ ಹೋಗೋ ಕಾಲೇಜ್ . ಅದೇ ಹಳೆ ಕ್ಲಾಸ್ ರೋಮ್ . ಬೋರ್ ಹೊಡೆಸೋ ಸಬ್ಜೆಕ್ಟ್ ಗಳು . ಅದೇ assignment .presentation ... ಎಲ್ಲಾ ಜಂಜಾಟಗಳ ಮಧ್ಯ ಬಹಳಷ್ಟು ಜನ ಸ್ವಂತ ಊರು, ಅಲ್ಲಿನ ಜನರು, ನೆನಪುಗಳನ್ನು ಮರೆಯೋದಿರ್ಲಿ ತನ್ನನ್ನೇ ತಾನು ಮರೆತಿರ್ತಾರೆ .. ಅದ್ರಲ್ಲಿ ನಾನು ಒಬ್ಬ .....
ಆದ್ರೆ ಇವತ್ತು ಕಾಲೇಜ್ ಮುಗಿಸಿ ಬಂದು ಸುಮ್ನೆ ಕೂತಿದ್ದೆ ಯಾಕೋ ನೆನಪಾಯಿತು ನಮ್ಮೂರು ಮುಸ್ಸಂಜೆ ಹೊತ್ತಲ್ಲಿ.... ಅದೇ ನಮ್ ತೀರ್ಥಹಳ್ಳಿ ಕಣ್ರೀ ....
ಜಸ್ಟ್ ಎರಡು ವರ್ಷದ ಹಿಂದೆ ಹೆಂಗೆ ಇತ್ತು ಲೈಫ್ ಅಂದ್ರೆ ??? ಆಹಾ.....
ನಮ್ಮೂರು ಅಂದ ಕೂಡಲೇ ನೆನಪಾಗಿದ್ದೆ ನಮ್ ತುಂಗಾ ನದಿ , ಮಧ್ಯ ಇರೋ ರಾಮ ಮಂಟಪ., ಹೊಳೆ ಸೈಡ್ ಇರೋ ಮರಳು ರಾಶಿ ,... ಕಮಾನು ಸೇತುವೆ , ನಮ್ ಆನಂದಗಿರಿ ಗುಡ್ಡ ಅದರ ಕೆಳಗೆ ಏರೋ ನಮ್ ತುಂಗಾ ಕಾಲೇಜ್ , ಕಾಲೇಜ್ಅಲ್ಲಿ ಕಳೆದ ದಿನಗಳು ,ಫ್ರೆಂಡ್ಸ್ ಜೊತೆ ಕೂತು ಹರಟೆ ಹೊಡೆದ ಕಾಲೇಜ್ ಕ್ಯಾಂಟೀನ್ , ಅಲ್ಲಿ ಸಿಗ್ತಾ ಇದ್ದಿದ್ದ ಹಾಫ್ ಟೀ ಒಂದ್ ಪ್ಲೇಟ್ ಪುಲಾವ್ ....ನಮಗೆಲ್ಲ ಊರಿನ ಸುದ್ದಿ discuss ಮಾಡಕ್ಕೆ ಮೀಟಿಂಗ್ ಸ್ಪಾಟ್ ಆಗಿದ್ದ ಕಾಲೇಜ್ ಬಸ್ ಸ್ಟಾಪ್ ಕಟ್ಟೆ , ಪಕ್ಕದಲ್ಲಿದ್ದ ಭಟ್ರ ಕ್ಯಾಂಟೀನ್ ಇಡ್ಲಿ ,ವಡೆ . ಭೂಷಣನ ಅಂಗಡಿ ಪಪ್ಸ್ ಕೂಲ್ಡ್ರಿಂಕ್ಸ್ ಚಿಪ್ಸ್ .. ಕಾಲೇಜ್ ಇಂದ ಬರ್ತ ಸಿಗ್ತಿದ್ದ ನಮ್ ಅಡ್ಡ ಅಂದ್ರೆ ಕುಶಾವತಿ ಪಾರ್ಕ್ , ಅಲ್ಲಿನ ಕಲ್ಲು ಬೆಂಚು. ಡೈಲಿ ಸಂಜೆ ಫ್ರೆಂಡ್ಸ್ ಜೊತೆ ಮಸಾಲಾ ಪೂರಿ ತಿನ್ನುತಿದ್ದ ಕೊಪ್ಪ ಸರ್ಕಲ್ ಪಾನಿಪುರಿ ಅಂಗಡಿ. ವಾರಕ್ಕೆ ಒಂದು ಸಲ ಪಾರ್ಟಿ ಮಾಡ್ತಿದ್ದ ಪಲ್ಲವಿ ಹೋಟೆಲ್.. ಬೋಂಡ ಸೂಪ್ . ಬೇಸಿಗೆ ಕಾಲದಲ್ಲಿ ಡೈಲಿ ವಿಸಿಟ್ ಹಾಕಿ ಲೈಮ್ ಜ್ಯೂಸು ಕುಡಿತಿದ್ದ SB Cold cafe......... ಹೇಳುತ್ತಾ ಹೇಳುತ್ತಾ ಹೋದ ಹಾಗು ಇನ್ನು ಇನ್ನು ನೆನಪಾಗುತ್ತ ಹೋಗುತ್ತೆ ಕಣ್ರೀ ನಮ್ ಊರು.... ಅಲ್ಲಿ ಕಳೆದ ದಿನಗಳು ...
ಕಳೆದು ಹೋದ ದಿನಗಳು ಮತ್ತೆ ಬರಲ್ಲ ಆದ್ರೆ ನೆನಪುಗಳು ಮತ್ತೆ ಮತ್ತೆ ಬರ್ತಾ ಇರತ್ತೆ ಅಲ್ವಾ???