ಸೋಮವಾರ, ಫೆಬ್ರವರಿ 16, 2015

ಪ್ರೀತಿಯ ದಾರಿ

ಹೊದ್ದು ಮಲಗಿತ್ತು ಮನದಲ್ಲಿ
ನಿನ್ನ ಮುದ್ದು ಮುಖದ ನೆನಪು . !
ಅಚ್ಚಾಗಿ ನಿಂತ ಮುಗುಳ್ನಗೆ
ಕಟ್ಟಿ ಕೊಟ್ಟಿತ್ತು ಹತ್ತೆಂಟು ಹುಚ್ಚು ಕನಸುಗಳ ...
ಮತ್ತೇನು ಬೇಕು ಮರುಳನಾಗಳು
ಸಾಕಲ್ಲವೇ ನಿನ್ನ ನೆನಪೆಂಬ ಮಿಂಚೊಂದು ??
ಅರಸನಾಗಿಹೆ ನಾ , ಒಲವ ತವರೂರಿಗೆ
ನಿನಗಾಗಿ ಕಾಯುತ್ತಾ . ಪ್ರೀತಿಯ ಜಡಿಮಳೆ ಸುರಿಸಲು
ನನ್ನೊಲವ ನೀ ದಿಕ್ಕರಿಸಿ ಮುನ್ನೆಡೆದರು
ನಿನಗಾಗಿ ಮೀಸಲಿಡುವೆ ನನ್ನಯ ನಾಳೆಗಳ
ಪ್ರೀತಿಯ ದಾರಿ ನೋಡುತ್ತಾ ..!!
ನಿನ್ನ ಹೆಜ್ಜೆಗಳಿಗಾಗಿ ಕಾಯುತ್ತಾ ..!!!!!!...............

ಶುಕ್ರವಾರ, ನವೆಂಬರ್ 21, 2014

ಬುತ್ತಿ

ನೆನಪಿನ ಬುತ್ತಿಯಲ್ಲಿ ಬೆಚ್ಚಗೆ ಕುಳಿತ
ಹತ್ತು ಹಲವು ನೆನಪುಗಳು
 ಮತ್ತೆ ಮತ್ತೆ ಬರುತಿದೆ
ಮನದ ಅಂಗಳಕ್ಕೆ ಸಾಲು  ಸಾಲಾಗಿ
ನೂರು ಪುಟಗಳು ತಿರುವಿದರೂ
ತಿರುಗಿ ಬರುತಿದೆ ನಿನ್ನ  ಹೆಜ್ಜೆ ಗುರುತು
 ಘಲ್ ಘಲ್ ಎನುತಿದೆ ಹೃದಯದಲ್ಲಿ
ನಾ ತೊಡಿಸಿದ ಒಲವಿನ
ಕಾಲ್ಗೆಜ್ಜೆಯ ಸವಿ ಸದ್ದು ....



ಶನಿವಾರ, ಆಗಸ್ಟ್ 9, 2014

ಪೂಜೆ ...

ಕಾಲ್ತೊಳೆದು ಒಳ ಕರೆವೆ 
ಬಲಗಾಲಿಟ್ಟು ಬಾ 
ನನ್ನ ಹೃದಯ ಮಂದಿರಕ್ಕೆ 
ಪೂಜಿಸುವೆ ನಿನ್ನ 
ಹೃದಯ ಸಿಂಹಾಸನದಲಿ ಪ್ರತಿಸ್ಥಾಪಿಸಿ 
ಅನವರತ 
ಮುಚ್ಚು ಮರೆ ಇಲ್ಲದೆ
ಹುಚ್ಚು ಪ್ರೀತಿಯ ಧಾರೆ ಎರೆವೆ
ನಿನ್ನ ನೋವನೆಲ್ಲ ಮರೆಸಿ ..... !!! 

ಸೋಮವಾರ, ಜುಲೈ 28, 2014

ಹೇಗೆ ಹಚ್ಚಲಿ ??

ಕಾಡಿಗೆ ಹಚ್ಚುವ ಬಯಕೆ ನನ್ನದು 
ನನ್ನ ಕಣ್ಣಲ್ಲಿ ಅಚ್ಚಾಗಿ ನಿಂತ ನಿನ್ನ 
ಕಿರುಗಣ್ಣಿನ ಆ ತುಂಟ ಕುಡಿನೋಟಕ್ಕೆ... 

ಇನಿಯ ಮತ್ತೊಬ್ಬನಿರುವಾಗ 
ಆ ನೋಟಕ್ಕೆ ಹೇಗೆ ಹಚ್ಚಲಿ ??
ನಾ ನಿನಗೆ ... !!!


ಶುಕ್ರವಾರ, ಜುಲೈ 25, 2014

ಉಡುಗೊರೆ

ಕೇಳಲಿಲ್ಲ ನಿನ್ನ ಬಳಿ 
ಒಲವನ್ನು ಬಿಟ್ಟು ಬೇರೇನೂ 
ಕೊಡಲಿಲ್ಲ ನೀ ನನಗೆ
ಒಂಟಿತನವನ್ನು ಬಿಟ್ಟು ಮತ್ತೇನು ...........

ಗುರುವಾರ, ಜುಲೈ 17, 2014

ಅತ್ತಿತ್ತ ನೋಡದಿರು . ಅತ್ತು ಹೊರಳಾಡದಿರು

ಸುಮ್ಮನೆ ಕುಳಿತಿದ್ದೆ , ಬೇಸರ ಕಳೆಯಲು youtube ಲಿ ಹಳೆ , ಹೊಸ , ಹಿಂದಿ , ಕನ್ನಡ ಚಲನಚಿತ್ರ ಗೀತೆಗಳನ್ನು ನೋಡುತ್ತಿದ್ದೆ , ಯಾವುದನ್ನು ನೋಡಿದರೂ ಮನಸ್ಸಿಗೆ ಸಮಾದಾನ ಇರಲ್ಲಿಲ್ಲ , ಹೀಗೆ ಹುಡುಕುತ್ತಾ  ಒಂದು ಹಾಡು  ಸಿಕ್ಕಿತು ಅದನ್ನು ಕೇಳಿದಾಗ ಮನಸ್ಸು ತುಂಬಾನೇ ಹಗುರಾಗಿತು .... ಪ್ರತಿಯೊಬ್ಬ ತಾಯಿಯೂ  ನನ್ನ ಮಗುವಿಗೆ ಮಮತೆಯನ್ನು ಧಾರೆಯೆರೆದು ಮಲಗಿಸುವಾಗ ಹೇಳುವ ಹಾಡು .... "ಅತ್ತಿತ್ತ ನೋಡದಿರು . ಅತ್ತು ಹೊರಳಾಡದಿರು ನಿದ್ದೆ ಬರುವಳು ಹೊದ್ದು ಮಲಗು ಮಗುವೇ .. ಜೋ.... "  . ಬಹುಷ ಕರ್ನಾಟಕದಲ್ಲಿ ಹುಟ್ಟಿದ ಪ್ರತಿಯೊಂದು ಮಗುವು ಈ ಹಾಡನ್ನು ಕೇಳದೆ ನಿದ್ರಿಸಿಲ್ಲವೇನೋ . ! ಆಹಾ  ಎಂತ ಅದ್ಬುತ ರಚನೆ !!! ತಾಯಿ ತನ್ನ ಮುದ್ದಿನ ಕಂದನನ್ನು ಚಂದಿರನ ಊರಿಗೇ ಕರೆದೊಯ್ಯುತಾಳೆ ..ನಕ್ಷತ್ರವನ್ನೆ ಮಗುವಿಗೆ ಅಂಗಿ ಮಾಡಿ ಹಾಕುವ ಕಲ್ಪನೆ ನಿಜಕ್ಕೂ ಅದ್ಭುತ , ಪಟ್ಟದಾನೆಯ ಮೇಲೆ ಪುಟ್ಟ ಮಗುವನ್ನು ಕೂರಿಸುವ ಕಲ್ಪನೆಯಂತು ಬಣ್ಣಿಸಲಸದಳ  ! ಇದನ್ನು ರಚಿಸಿದ ಮಹಾನುಭಾವರಿಗೆ ಹಾಟ್ಸ್ ಆಫ್  ಹೇಳಲೇ ಬೇಕು .... ಕೇಳಿದ ಕೂಡಲೇ ನೆನಪಾಗಿದ್ದು ಬಾಲ್ಯದಲ್ಲಿ ನನ್ನ ತಂಗಿ ತಮ್ಮಂದಿರನ್ನು ಮಲಗಿಸುವಾಗ . ಅಜ್ಜಿ , ಅಮ್ಮ ಚಿಕ್ಕಮಂದಿರು ಈ ಹಾಡನ್ನೇ ಹೆಚ್ಚಾಗಿ ಹೇಳುತ್ತಿದ್ದರುಆರೇಳು ತಿಂಗಳಿನಿಂದ ಊರಿಗೆ ಹೋಗದೇ ಕುಟುಂಬದವರನ್ನು ನೋಡದ ನನಗೆ ಯಾಕೋ ಊರಿನ , ಮನೆಯವರ ನೆನಪು ಬಹಳವಾಗಿ ಕಾಡಲು ಶುರುವಾಯಿತು ... 

ಭಾನುವಾರ, ಜುಲೈ 13, 2014

ಕನಸು

ಸುರಿಯುತ್ತಿರುವ ಜಡಿ ಮಳೆಯಂತೆ
ನಿನ್ನ ನೆನಪುಗಳ ಮಳೆ
ನನ್ನ ಎದೆಯಲ್ಲಿ
ನನ್ನೀ ಬೆಂದ ಹೃದಯಕ್ಕೆ
ಒಲವೆಂಬ ತಂಗಾಳಿಯಾಗಿದ್ದೆ ನೀ ,,,
ಮರೆತೆ ನಾ ,,, ನನ್ನನ್ನೇ
ನಿನ್ನ ಒಲವಿನ ನುಡಿಗೆ
ಅರಿವಿಲ್ಲದಂತೆ ಬಂದಿಯಾಗಿದ್ದೆ
ನಿನ್ನ ಒಲುಮೆಯ ಪಾಶಕ್ಕೆ
 ಕನಸು .... ??
ಅದು ಕನಸಾಗಿಯೇ ಉಳಿದಿತ್ತು
ನಿನ್ನ ತೋಳಲ್ಲಿ ಬಂದಿಯಾಗುವ ಹಂಬಲ
ಕಣ್ಣು ತನಗರಿವಿಲ್ಲದೆಯೇ  ತನ್ನ ಹನಿಗಳನ್ನು ಹೊರಹಾಕಿತ್ತು ..
ಮತ್ತೊಬ್ಬರ ತೋಳಲ್ಲಿ ನೀನೇ ಬಂದಿಯಾಗಲು ಹೊರಟಾಗ .. !!!